ಕಾಂಕ್ರೀಟ್

	ನೀರಿನ ಬಳಕೆಯಿಂದ ಬಂಧಸಾಮಥ್ರ್ಯ ಪಡೆಯುವ ಒಂದು ವಸ್ತು (ಸಿಮೆಂಟ್). ಜಲ್ಲಿ ಕಲ್ಲುಗಳು, ನೀರು, ನಿಯಂತ್ರಿತ ಪರಿಮಾಣದಲ್ಲಿ ಸೆರೆಹಿಡಿದಿಟ್ಟಿರುವ ಗಾಳಿ-ಇವುಗಳ ಯುಕ್ತ ಮಿಶ್ರಣದಿಂದ ದೊರೆಯುವ ಒಂದು ಎಂಜಿನಿಯರಿಂಗ್ ಸಾಮಗ್ರಿ. ಆರಂಭ ಸ್ಥಿತಿಯಲ್ಲಿ ಇದಕ್ಕೆ ಪ್ಲಾಸ್ಟಿಕ್ ಗುಣವಿರುವುದರಿಂದ ಕಾಂಕ್ರೀಟಿಗೆ ವಿವಿಧ ಬಗೆಯ ಆಕಾರಗಳನ್ನು ಕೊಡಬಹುದು. ಸಿಮೆಂಟ್ ಮತ್ತು ನೀರು ಇವುಗಳ ನಡುವಿನ ಜಲ ಸಂಯೋಜನೆಯಿಂದ (ಹೈಡ್ರೇಶನ್) ಕಾಂಕ್ರೀಟಿನಲ್ಲಿ ಸಾಮಥ್ರ್ಯ ಉತ್ಪನ್ನವಾಗುತ್ತದೆ. ಕ್ಯಾಲ್ಸಿಯಂ ಸಿಲಿಕೇಟುಗಳು, ಕ್ಯಾಲ್ಸಿಯಂ ಅಲೂಮಿನೇಟ್, ಕ್ಯಾಲ್ಸಿಯಂ ಹೈಡ್ರಾಕ್ಸೈಡ್-ಇವು ಕಾಂಕ್ರೀಟಿನಲ್ಲಿರುವ ಅಂತಿಮ ಉತ್ಪನ್ನಗಳು ಇವು ನೀರಿನಲ್ಲಿ ಕರಗುವುದಿಲ್ಲ.  ಜಲ್ಲಿ ಕಲ್ಲಿಗಳನ್ನು ಒಂದು ಗಡಸು ಮಾತೃಕೆಯಲ್ಲಿ ಇವು ಬಂಧಿಸಿರುತ್ತವೆ. ಅದುಮುವ ತ್ರಾಸವನ್ನು (ಕಂಪ್ರೆಸ್ಸಿವ್ ಸ್ಪ್ರೆಸ್) ಎದುರಿಸಿ ನಿಲ್ಲುವ ಸಾಮಥ್ರ್ಯ ಕಾಂಕ್ರೀಟಿಗಿದೆ.  ಆದರೆ ಎಳೆತದ ತ್ರಾಸದ (ಟೆನ್ಸೈಲ್ ಸ್ಪ್ರೆಸ್) ವಿರುದ್ಧ ಕಾಂಕ್ರೀಟಿಗೆ ಇದೇ ಸಾಮಥ್ರ್ಯವಿದೆ ಎನ್ನುವಂತಿಲ್ಲ. ಉದಾಹರಣೆಗೆ ತೂಕದ ಕಟ್ಟಡಗಳನ್ನು ಕಾಂಕ್ರೀಟ್ ಗೋಡೆಗಳು ಹೊರಬಲ್ಲವು. ಆದರೆ ತೂಕದ ಮಾಡುಗಳನ್ನು ಕಾಂಕ್ರೀಟ್ ಅಡ್ಡ ತೊಲೆಗಳು ಹೊರಲಾರವು. ಅವು ಬಿರುಕು ಬಿಟ್ಟು ಒಡೆದೇ ಹೋಗುತ್ತವೆ. ಇಂಥಲ್ಲಿ ಭದ್ರ ಕಾಂಕ್ರೀಟನ್ನು (ರೀ ಇನ್‍ಫೋಸ್ರ್ಡ್ ಕಾಂಕ್ರೀಟ್) ಬಳಸಬೇಕಾಗುತ್ತದೆ.

	ಬಂಧವಸ್ತುವಾಗಿ ಸಿಮೆಂಟಿನ ಬಳಕೆಯನ್ನು ಕಂಡುಹಿಡಿಯುವ ಮೊದಲು ಜೇಡಿಮಣ್ಣನ್ನು ಇದಕ್ಕಾಗಿ ಬಳಸುತ್ತಿದ್ದರು. ಆದರೆ 1900ರಲ್ಲಿ ಪೋರ್ಟ್‍ಲ್ಯಾಂಡ್ ಸಿಮೆಂಟನ್ನು ಕಂಡುಹಿಡಿದ ಅನಂತರ ಕಾಂಕ್ರೀಟಿಗೆ ಇದನ್ನೇ ಬಳಸುವುದು ವಾಡಿಕೆಯಾಗಿದೆ.

	ಸಾಮಾನ್ಯವಾಗಿ ಸಿಮೆಂಟ್ ಕಾಂಕ್ರೀಟಿನ ಸಾಂಧ್ರತೆ 2-4 ಗ್ರಾಂ./ಮಿ.ಲೀ. ಇರುತ್ತದೆ. ಅಂದರೆ ಘನ ಅಡಿಗೆ ಸುಮಾರು 150 ಪೌಂಡಿನಷ್ಟಾಯಿತು. ಇದರ ಬಲ ಸುಮಾರು 1,000 ದಿಂದ 10,000 ಪೌಂ./ಚ. ಇಂಚ್ ಇರಬಹುದು. ಕಾಂಕ್ರೀಟಿನ ಬಲ ಅದರಲ್ಲಿ ಜೋಡಿಸಿರುವ ಬಿಡಿಭಾಗಗಳ ಗುಣ, ತಯಾರಿಸಿದ ರೀತಿ ಮತ್ತು ಮಿಶ್ರಣದಲ್ಲಿ ನೀರಿನ ಅಂಶಗಳನ್ನು ಅವಲಂಬಿಸಿದೆ. ಒಂದು ಮಿತಿಯಲ್ಲಿ ನೀರಿನ ಅಂಶ ಕಡಿಮೆ ಇದ್ದಷ್ಟೂ ಕಾಂಕ್ರೀಟಿನ ಬಲ ಹೆಚ್ಚಾಗಿರುವುದು.			  
  (ಎಂ.ಎ.ಎಸ್.ಆರ್.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ